ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪ್ರೊ.ಶಿ.ಶಿ. ಬಸವನಾಳ ಅವರ ಮೊಮ್ಮಗ ಪಂ. ಡಾ. ಮೃತ್ಯುಂಜಯ ಶೆಟ್ಟರ ಈ ನಾಡು ಕಂಡ ಅಪ್ರತಿಮ, ಪ್ರತಿಭಾವಂತ ಹಾಗೂ ಸುಮಧುರ ಕಂಠದ ಗಾಯಕ, 1964 ಎಪ್ರಿಲ್ 21ರಂದು ಧಾರವಾಡದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಮೂಜಿಕ್ ಮತ್ತು ಎಂ. ಮೂಜಿಕ್ ಪರೀಕ್ಷೆಗಳನ್ನು ಪ್ರಥಮ ಬ್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಪಾಸಾಗಿದ್ದಾರೆ. ‘ತುಮರಿ ಗಾಯನದ ಸೌಂದರ್ಯ ಸಮೀಕ್ಷೆ’ ಎಂಬ ವಿಷಯ ಕುರಿತ ಇವರ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ದೊರೆತಿದೆ. – ಪಂ.ಮಲ್ಲಿಕಾರ್ಜುನ ಮನಸೂರ, ಪಂ.ಬಸವರಾಜ ರಾಜಗುರು, ಪಂ.ಸಂಗಮೇಶ್ವರ ಗುರವ, ಪಂ. ಪ್ರಭುದೇವ ಸರದಾರ ಮೊದಲಾದವರ ಶಿಷ್ಯತ್ವದಲ್ಲಿ ಪಾರಂಪರಿಕ ಸಂಗೀತ ಶಿಕ್ಷಣ ಪಡೆದಿರುವ ಪಂ.ಮೃತ್ಯುಂಜಯ ಶೆಟ್ಟರ ಅವರು ಕಳೆದ 45 ವರ್ಷಗಳಿಂದ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಸುತ್ತಿ ಜಯಪುರ, ಗ್ವಾಲೀಯರ ಹಾಗೂ ಕಿರಾಣಾ ಘರಾಣಾಗಳಲ್ಲಿ ಸಂಗೀತದ ಮೂವತ್ತು ಪ್ರಕಾರಗಳನ್ನು ಪ್ರಚುರಪಡಿಸುತ್ತ ಬಂದಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಉಪಶಾಸ್ತ್ರೀಯ ಗಾಯನ, ಭಜನ್, ಭಾವಗೀತೆ, ಠುಮ್ಮಿ, ದಾಸರ ಪದಗಳು, ತತ್ವಪದಗಳು, ನಾಟ್ಯಸಂಗೀತ ಹಾಗೂ ಬಹಳ ಮುಖ್ಯವಾಗಿ ಬಸವಾದಿ ಶರಣರ ವಚನಗಳ ಸುಧೆಯನ್ನು ಎಲ್ಲೆಡೆ ಹರಿಸಿರುವ ಹಾಗೂ ಹರಿಸುತ್ತಿರುವ ಪಂ. ಶೆಟ್ಟರ ಅವರು ಸಂಗೀತ ಕ್ಷೇತ್ರದ ಅನೇಕ ಸಂಘಸಂಸ್ಥೆಗಳ ಸದಸ್ಯತ್ವ ಹೊಂದಿ ಆ ಕಲೆಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.
ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ಕುರಿತು ಐದು ಸಾಕ್ಷಚಿತ್ರಗಳನ್ನು ನಿರ್ಮಿಸಿದ್ದು, ತಾನಸೇನ ನಾಟಕದಲ್ಲಿ ಪಾತ್ರವಹಿಸಿದ್ದು, “ಅಂಜಿ” ನಾಟಕಕ್ಕೆ